ಅರಿಶಿನದೊಳಗೆ ನನ್ನ ಹೆಣ್ತನದ ಪಕ್ವತೆಯ ಲಾವಣ್ಯಗಾಥೆ

image

      ಕೆಲವೊಮ್ಮೆ ಜೀವನದ ಧ್ಯೇಯ, ಆಗು-ಹೋಗುಗಳ ಉದ್ದೇಶ, ನಮ್ಮ ಮಂದಹಾಸ, ನಾಚಿಕೆ,  ನಗು ಅಳುಗಳಿಗೆ ಕಾರಣವೇ ತಿಳಿಯದು. ನಮ್ಮೆಲ್ಲರ ಜೀವನ ಒಂದು ಮಿಸ್ಟೀರಿಯಸ್ ( mysterious)  ಆದಂತಹ ರೋಚಕ ಕಥೆಯೆಂದೆ ಹೇಳಬಹುದು.  ಅಲ್ಲಿ ಸಾಕಷ್ಟು ನಿಗೂಢತೆಗಳು ಅಡಗಿಕೊಂಡಿರುತ್ತದೆ. ನಮ್ಮ ಪ್ರತಿ ನಿಗೂಢತೆಗಳನ್ನು ಬಿಡಿಸಿ ಬಿಡಿಸಿ ಆಳವಾಗಿ ನೋಡಿದಷ್ಟು ನಮ್ಮ ಅಂತರಾಳದ ಶಕ್ತಿಯನ್ನು ಭೇಟಿಮಾಡುತ್ತೆವೆ.
     ನನ್ನಂತಹ ಅವನಲ್ಲದ ಅವಳು ತುಂಬು ಗರ್ಭಿಣಿಯರಂತೆ. ಏಕೆಂದರೆ ನಾವೆಷ್ಟೇ ಅದುಮಿ ನಮ್ಮ ಹೆಣ್ತನವನ್ನು ಒತ್ತಿ ಇಟ್ಟರು, ಅದು ಗರ್ಭದರಿಸಿದ ಗರ್ಭಿಣಿಯಂತೆ ಜಗತ್ತಿಗೆ ತನ್ನ ಅಸ್ತಿತ್ವದ ಸುಳಿವನ್ನು ನೀಡುತ್ತದೆ.  ಸರಿಯಾದ ಸಮಯ ಬಂದಾಗ ಅನುಭವಿಸಾಲಾಗದಷ್ಟು ಬೇನೆ ಕಣ್ಣಿರುಗಳು, ಸಹಿಸಲಾಗದಷ್ಟು ನಿಂದನೆ ಅಸಡ್ಡೆಗಳು ತಿಳಿಯದೆ ಹೆಣ್ತನಕ್ಕೆ ಜನ್ಮ ನೀಡುತ್ತದೆ.
      ನಾನು ಚಿಕ್ಕವಳಿದ್ದಾಗ ಗಂಡು – ಹೆಣ್ಣಿಗೆ ಇರುವ ವ್ಯತ್ಯಾಸವೆ ತಿಳಿಯದ ಮುಗ್ಧ ಜೀವಿ. ನನಗೆ ಈಗಲೂ ನೆನಪಿದೆ, ನಮ್ಮಮ್ಮನ ಆತ್ಮೀಯ ಸ್ನೇಹಿತೆ ಚಂದ್ರಕಲಾ ಆಂಟಿಯ ಡೆಲವರಿಯಾದಾಗ ನಾನು ನಮ್ಮಮ್ಮನ ಕೂಡ ಅವರನ್ನು ಭೇಟಿಮಾಡಲು ಹೋಗಿದ್ದೆವು. ನಾನು ಯಾವಾಗಲೂ ಹೆಣ್ಣು ಮಕ್ಕಳನ್ನೇ ತುಂಬಾ ಇಷ್ಟಪಡುತಿದ್ದೆ, ಅದಕ್ಕೆ ಮುಖ್ಯ ಕಾರಣ ಸಾಮಾನ್ಯವಾಗಿ ಅವರು ನಿಶಬ್ಧ ಹಾಗೂ ನನ್ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತಿದ್ದರು. ಅಂದು ಆಂಟಿಯನ್ನು ನೋಡಲು ಹೋದಾಗ ನಾನು ಅವರನ್ನು ಇದು ಗಂಡು ಪಾಪಾ ಅಥವಾ ಹೆಣ್ಣು ಪಾಪಾ?  ಎಂದು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಇಣುಕಿ ಇಣುಕಿ ನೋಡುತ್ತ ಕೇಳಿದೆ. ಅದಕ್ಕೆ ಅವರು ಅದಕ್ಕೆ ಕೆಳಗೆ ಹಾಕಿದ ಬಟ್ಟೆಯನ್ನು ಸರಿಸಿ ನೋಡು, ತಿಳಿಯುತ್ತದೆ ಎಂದರು. ಸರಿಸಿ ನೋಡಿದೆ,ಆ ಮಗುವಿಗೆ ನನಗೆ ಹೇಗೆ ಮುಂದೊಂದು ತೂಗುವ ವಸ್ತುವಿತ್ತು ಅದಕ್ಕೂ ಹಾಗೆಯಿತ್ತು. ನನ್ನನ್ನು ನಾನು ಹೆಣ್ಣೆಂದೂ ಭಾವಿಸುತ್ತಿದ್ದ ಆ ವಯಸ್ಸಿನಲ್ಲಿ ಆ ಮಗುವು ಹೆಣ್ಣೆಂದೂ ಹೇಳಿದೆ. ಅಲ್ಲಿದ್ದ ಎಲ್ಲರೂ ನನ್ನ ಶಿಶ್ನ ಹಾಗೂ ಯೋನಿಗೆ ಇರುವ ಅಂತರ ತಿಳಿಯದ ಮುಗ್ಧತೆಗೆ ನಕ್ಕರು. ಆದರೆ ಅದರ ಅಂತರ ನನಗೆ ತಿಳಿದದ್ದು … ನನ್ನ ಟ್ಯೂಷನ್ ಟೀಚರ್ ಮಗಳು ನನ್ನನ್ನು ಲೈಂಗಿಕವಾಗಿ ಉಪಯೋಗಿಸಿದಾಗ. ಆಗಲೇ ನನಗೆ ಹೆಣ್ಣಿನ ಹಾಗೂ ಗಂಡಿನ ಜನನಾಂಗದ ಅಂತರ ತಿಳಿದದ್ದು.
     ಖಂಡಿತವಾಗಲು ಆ ಅಂತರದ ತಿಳುವಳಿಕೆ ನನ್ನಲ್ಲಿ ಭೀಕರತೆಯ ಭಯಂಕರ ಆತಂಕವನ್ನೆ ತಂದಿಟ್ಟಿತ್ತು.  ಏಕೆಂದರೆ ನಾನು ದೈಹಿಕವಾಗಿ ಹೆಣ್ಣಲ್ಲವೆಂಬ ಭಯಂಕರ ಸತ್ಯ.  ನನ್ನ ಒಳಗಿರುವ ಹೆಣ್ತನ ಯಾವುದೋ ಬೇರೆಯವರ ದೇಹದಲ್ಲಿದೆಯೆಂಬ ಕೊರಗು. ಅಮ್ಮ ಕೊಡಿಸಿದ ಚಿಟ್ಟೆಯ ಹೇರ್ ಕ್ಲಿಪ್, ಕೆಂಪಾದ ಹೇರ್ ಬ್ಯಾಂಡ್, ನನ್ನ ಪಿಂಕ್ ಫ್ರಾಕ್ ಎಲ್ಲವೂ ಕೇವಲ ನನ್ನೋಳಗಿರುವ ಹೆಣ್ತನಕ್ಕೆ ಆಟದ ಸಾಮಾನುಗಳಾಗಿದ್ದವು ಹೊರತು ಅದೆಂದು ನನ್ನ ಜೇವನಕ್ಕೆ ವಾಸ್ತವವಾಗಿ ಉಪಯೋಗವಾಗಿರಲಿಲ್ಲ.
     ಆದರೆ ನನಗಾದ ಆ ವಿಧಿಯ ವಂಚನೆ ನನ್ನನ್ನು ನನ್ನ ಹೆಣ್ತನದ ಪ್ರಕೃತಿಯ ಹರಿವಿಗೆ ಅಣುಕಟ್ಟೆಯಾಗಿರಲಿಲ್ಲ. ಕಾಲ ಚಕ್ರದ ತಿರುವಿಕೆಯಲ್ಲಿ ನನ್ನ ಬಾಲ್ಯ ಕೇವಲ ತನ್ನ ಅಂತರಾಳದ ತಾಳಕ್ಕೆ ಕುಣಿಯುತ್ತಿತ್ತೇ ಹೊರತು ಸಮಾಜದ ಕಟ್ಟಳೆಗಳಿಗಲ್ಲಾ. ನನ್ನ ಬಾಲ್ಯದಲ್ಲಿ ನನಗೆ ಯಾವುದೇ ತೊಂದರೆ ಒದಗಲಿಲ್ಲ, ನಾನು ಹೆಣ್ಣು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆದರು, ನನ್ನ ಗೊಂಬೆಯಾಟ, ಅಡುಗೆ ಮನೆಯಾಟ, ನನ್ನ ದಯಾದಿ ಅಕ್ಕನೊಂದಿಗೆ ಆಡುವ ಮನೆಯಾಟವೆಲ್ಲ ನನ್ನ ಅಂತರದಲ್ಲಿ ಮಲಗಿದ್ದ ಆ ಹೆಣ್ಣು ಮಗುವಿಗೆ ಲಾಲಿ ಹಾಡುತಿದ್ದವು. ಆದರೆ ನಿಜವಾದ ನೋವುಗಳ ಜಾಗಟೆ ನನ್ನ ಅಂತರಾಳದಲ್ಲಿ ನೆಮ್ಮದಿಯಿಂದ ಮಲಗಿದ್ದ ಹೆಣ್ತನವು ಗಾಬರಿಯಿಂದ ಎಚ್ಚರವಾಗುವ ಸಮಯ ಹತ್ತಿರದಲ್ಲಿತ್ತು.  ನನ್ನ ಸುತ್ತ ಮುತ್ತಲ ಬದಲಾವಣೆಗೆ ನಾನು ಗಾಭರಿಯಾದೆ. ಹಸುಳೆ ಕರುವು ಅಪರಿಚಿತರನ್ನು ನೋಡುವಾಗ ಗಾಬರಿಯಾಗುತ್ತದಲ್ಲಾ… ಹ್ಞಾಂ… ಅಂತೆಯೆ ಈ ಅಪರಿಚಿತ ಬದಲಾವಣೆಗೂ ನಾನೂ ಕೂಡ ತತ್ತರಿಸಿ ಹೋದೆ.
     ಒಮ್ಮೆ ನನ್ನ ಬೇಸಿಗೆ ರಜಾದಿನಗಳಲ್ಲಿ ಯಾರು ಮನೆಯಲ್ಲಿರಲಿಲ್ಲಾ, ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗಿದ್ದರು,  ಇದ್ದ ನನ್ನ ತಮ್ಮ ಸ್ನೇಹಿತರೊಂದಿಗೆ ಹೊಳೆಗೆ ಆಡಲು ಹೋಗಿದ್ದಾ. ಎಲ್ಲರೂ ಬರುವುದು ತಡವಾಗುತ್ತದೆ. ಅಮ್ಮನ ಸಹಾಯ ಕೈಯಾದ ನಾನು ಇದ್ದ ಪಾತ್ರೆಗಳನ್ನೆಲ್ಲಾ ಬೆಳಗಿ, ಬಟ್ಟೆಯನೆಲ್ಲಾ ಒಗೆದೆ. ನೆನ್ನೆಯೆಲ್ಲ ನನ್ನ ತಿಂಡಿ ತಿನಿಸುಗಳ ಅಡುಗೆ ಪ್ರಯೋಗದಿಂದ ಎಣ್ಣೆ ಖಾಲಿ ಮಾಡಿದ್ದಕ್ಕೆ ನಾನು ಅಡುಗೆ ಮನೆಯೊಳಗೆ ಕಾಲಿಡುವಂತಿಲ್ಲ ಎಂದು ಅಮ್ಮ ಗೆರೆ ಎಳೆದಿದ್ದಳು. ಸ್ನೇಹಿತರು… ಆಗ ನನಗ್ಯಾವ ಸ್ನೇಹಿತರು?  ಒಂಟಿ ಮನಸ್ಸು ನನ್ನದು. ನನ್ನ ರಾಜಕುಮಾರಿಯನ್ನು ಅದಾಗಲೇ ತಿಂಡಿ ತಿನ್ನಸಿ ಮಲಗಿಸಿದ್ದೆ. ಮಾಡಲು ಇನ್ನೇನು ಇಲ್ಲ. ಇರುವ ಟಿವಿ ಪೆಟ್ಟಿಗೆ ಹಚ್ಚಿದೆ. ನಾಗಮಂಡಲ ಚಿತ್ರದ ಆ ಅಂದಗಾತಿ ನಾಯಕಿಗೆ ಚಿತ್ರದಲ್ಲಿ ಋತುಮತಿಯಾದ ಮೊದಲ ದಿನವನ್ನು ಸಂಭ್ರಮಿಸಲಾಗುತಿತ್ತು. ಆ ಹೆಣ್ತನದ ಆಚರಣೆಗೆ ನನ್ನ ಮನಸ್ಸು ಆಸೆಪಟ್ಟಿತ್ತು. ನನ್ನ ಮನಸ್ಸನ್ನು ನಾನು ಯಾವಾಗಲೂ ನನ್ನ ಮಗಳಂತೆ ಸಲಹಿದ್ದೇನೆ. ನನ್ನ ತಾಯಿಯಿಂದ ಕಲೆತ ತಾಯ್ತನದ ಪಾಠಗಳನ್ನು ನಾನೆಂದೂ ಮರೆಯುವುದಿಲ್ಲ.  ನನ್ನ ಮನಸ್ಸಿನ ಕೋರಿಕೆಯಂತೆ ದೇವರ ಮನೆಯಲ್ಲಿದ್ದ ಅರಿಶಿನವನ್ನು ಒಂದು ಬಟ್ಟಲಲ್ಲಿ ಹಾಕಿಕೊಂಡು ಬಚ್ಚಲಮನೆಗೆ ನಡೆದೆ. ಹಂಡೆಯಲ್ಲಿ ಹದವಾದ ಬಿಸಿ ನೀರು ಇತ್ತು. ನನ್ನ ದೇಹಕ್ಕೆ ಅಂದು ಅರಿಶಿನದ ಸ್ಪರ್ಶ, ನಾನು ಅದನ್ನು ಅಂತರಾಳದಿಂದ ಅನುಭವಿಸಿದ್ದೆ. ನೀರು ದೇಹದಂಗಳದಲ್ಲಿ ಹರಿದು ಆ ಅರಿಶಿನದ ಎಣ್ಣೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಯಿತಷ್ಟೆ, ಆದರೆ ಆ ಅರಿಶಿನ ನನಗೆ ದೇಹದ ಕಾಂತಿ ಮಾತ್ರವಲ್ಲ ನನ್ನ ಮನಸ್ಸಿಗು ಶ್ರೀಮಂತಿಸಿತು. ಬಚ್ಚಲುಮನೆಯಿಂದ ನಾನು ಸಂಪೂರ್ಣ ಹೆಣ್ಣಾಗಿ ಬಂದೆ. ಅಮ್ಮನ ಕೋಣೆಗೆ ಬಂದು ಅವಳ ಸುಂದರ ಚಿನ್ನದ ಅಂಚಿನ ಕೆಂಪು ರೇಶ್ಮೆಯ ಸೀರೆ ನನ್ನನ್ನು ಅಲಂಕರಿಸಿತು. ಕೋಣೆಯ ಕೊನೆಯಲ್ಲಿ ಅಮ್ಮ ಅಣಗಿಸಿಟ್ಟ ಕಾಡಿಗೆಯ ಡಬ್ಬಿಯೊಳಗಿನ ಅಂಜನವು ಈಗ ನನ್ನ ಅಕ್ಷಿಯ ಅಂಚನ್ನು ತುಂಬಿಕೊಂಡಿತು. ನನ್ನ ನಾಟ್ಯದ ಗೆಜ್ಜೆಯನ್ನು ಕಾಲಿಗೆ ಕಟ್ಟಿದೆ. ಅಮ್ಮ ಅವಳ ಮದುವೆಯಲ್ಲಿ ಉಪಯೋಗಿಸಿ ಈಗ ಅಲ್ಮರಾದ ಮೂಲೆಗೆ ಸೇರಿದ್ದ ಚೌರಿ ನನ್ನ ಕೇಶರಾಶಿಗೆ ಜೊತೆಯಾಯಿತು. ಹಣೆ ತುಂಬಾ ಕುಂಕುಮ, ಆ ದೊಡ್ಡ ಮನೆಯಲ್ಲಿ ನಾನೆ ಮಹಾಕನ್ಯೆ. ಕುಣಿದೆ, ಹಿಗ್ಗಿದೆ, ಹಾಡಿದೆ… ನನ್ನ ಸಂತಸಕ್ಕೆ ಪಾರವೇ ಇಲ್ಲ. ಅಂದು, ಆ ದಿನ ನಾನು ದೊಡ್ಡವಳಾದೆ. ನನ್ನ ಸಂತಸದ ಮೈ ಮಾಟದಲ್ಲಿ ಸಮಯ ಕಳೆದದ್ದೆ ತಿಳಿಯಲಿಲ್ಲ. ಅಯ್ಯೋ! ನೋಡಿದರೆ ಮಧ್ಯಾಹ್ನದ ಹನ್ನೆರಡು ಗಂಟೆಗೆ ಇನ್ನು ಐದೇ ನಿಮಿಷ! ಅಮ್ಮ ಇನ್ನೇನೂ ಡ್ಯೂಟಿಯಿಂದ ಅಕ್ಕಿಯನ್ನು ಕುಕ್ಕರ್‌ನಲ್ಲಿ ಬೇಯಿಸಲು ಬರುತ್ತಾಳೆ. ಎದ್ದೆನೊ ಬಿದ್ದೆನೊ ಎಂದು ಅವಸರ ಅವಸರದಿಂದ ಹಾಕಿದ್ದನ್ನೆಲ್ಲಾ ಬಿಚ್ಚಿ, ಮಡಚಿ ಅದರದರ ಜಾಗದಲ್ಲಿ ಚೊಕ್ಕವಾಗಿಟ್ಟೆ. ಮತ್ತೆ ಬಚ್ಚಲುಮನೆಗೆ ಹೋಗಿ ತಣ್ಣೀರಿನಲ್ಲೆ ಮೈಗೆ ನೀರು ಚೋಪುತ್ತಾ ಸೋಪು ತಿಕ್ಕಿ ತಿಕ್ಕಿ ಎಲ್ಲವನ್ನೂ ತೊಳೆದೆ. ಅಮ್ಮನಿಗೆ ಯಾವುದೇ ಶಂಕೆ ಬರಬಾರದು. ಬಂದು ನನ್ನ ಚಡ್ಡಿ ಶರ್ಟ ವೇಷ ಧರಿಸಿದೆ. ಅದಾಗಿ ಐದು ನಿಮಿಷಕ್ಕೆ ಅಮ್ಮ ಬಾಗಿಲು ತಟ್ಟಿದಳು. ಅಮ್ಮನನ್ನು ಕಿಲಕಿಲನೆ ಸ್ವಾಗತಿಸಿದೆ, ಅವಳಿಗೆ ಏನೂ ತಿಳಿಯಲಿಲ್ಲವೆಂಬ ಸಂತೋಷ ನನ್ನಲ್ಲಿ. ಅವಳು ಕೋಣೆಗೂ ಹೋದಳು… ಅಬ್ಬಾ! ಏನೂ ತಿಳಿಯಲಿಲ್ಲ. ನನಗೆ ಒಂದು ರೀತಿಯ ಸಮಾಧಾನ.
     ಆದರೂ ನಮ್ಮಮ್ಮನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ. ಅವಳು ಬಹಳ ಸೂಕ್ಷ್ಮ ಹಾಗೂ ಜಾಣೆ.  ಅಂತು ಇಂತು ನನ್ನ ಸಂತೋಷ ಸಮಾದಾನಗಳೆಲ್ಲವು ಅವಳ ಜಾಣತೆಗೆ ಕೈದಿಯಾಗಿ ಹೋದವು. ಸಿಕ್ಕಿಹಾಕಿಕೊಂಡೆ. ಅದು ನಾ ವರೆಸಿದ ಟವಲು. ಆ ಬಿಳಿಯ ಟವಲೆಲ್ಲ ಅರಿಶಿನ ಅರಿಶಿನ. ನನಗೆ ಚೆನ್ನಾಗಿ ಏಟು ಬಿತ್ತು. ಅವಳಿಗೆ ಯಾವುದೇ ಕಾರಣಕ್ಕೂ ಅಪ್ಪನಿಗೆ ಹೇಳಬೇಡ, ಇನ್ನೂ ಮುಂದೆ ಈ ರೀತಿ ಮಾಡುವುದಿಲ್ಲವೆಂದು ಗೋಳಾಡಿದೆ. ಸಾಯಂಕಾಲ ಆಗುವಷ್ಟರಲ್ಲಿ ಅವಳ ಕಿಡಿ ಕೋಪ ತಣ್ಣಗಾಯಿತು. ನಾನು ಹೀಗೆ ಸಾಕಷ್ಟು ಬಾರಿ ಸಿಕ್ಕಿ ಬಿದ್ದಿದ್ದೆನೆ, ತಪ್ಪಿಸಿಯೂಕೊಂಡಿರುವೆ. ಆದರೆ ನನ್ನ ಆ ನೆನಪುಗಳು ಇಂದಿಗೂ ಮಂಜುಳ ಗೀತೆ.
     ಎಷ್ಟೇ ಕಟ್ಟಳೆಗಳಿದ್ದರು, ಎಷ್ಟೇ ರೂದಿ ಬದ್ದಿಯ ಪರಮಾವಧಿಯೇ ಇದ್ದರೂ ಅದನೆಲ್ಲಾ ಮೀರಿ, ನನ್ನ ಪ್ರಕೃತಿಯ ಸ್ವಂತಿಕೆಯನ್ನು ಪ್ರತಿ ಭಾರಿಯೂ ಅನುಭವಿಸಿದಾಗ, ಅದನ್ನು ಅಪ್ಪಿಕೊಂಡಾಗ ನನ್ನ ನಿಗೂಢತೆಗಳನ್ನು ಛೇದಿಸಿ ಹೊಸದೊಂದು ಸತ್ಯವನ್ನು ತಿಳಿದ ನೆಮ್ಮದಿ ಖುಷಿ. ನನ್ನ ಮೊದಲ ಸತ್ಯವು ಕಹಿಯಾಗಿರ ಬಹುದು. ಆದರೆ ನಂತರದ ಸತ್ಯದ ನಿಗೂಢತೆಯನ್ನ ಪ್ರತಿ ಭಾರಿ ಬಿಡಿಸಿದಾಗ ಅದನ್ನು ಹತ್ತಿರದಿಂದ ಸವಿದಿದ್ದೇನೆ, ಅದು ನನ್ನನ್ನು ಯಾವಾಗಲೂ ಉಪ್ಪರಿಸಿದೆ ಹೊರತು ಎಂದು ನನ್ನನ್ನು ಕತ್ತರಿಸಿ ಕೆಡವಿಸಿಲ್ಲಾ.
                       – ಶಿಲೋಕ್ ಮುಕ್ಕಾಟಿ ©

Advertisements

ಬದುಕು ಪ್ರೇಮದಿಂದ

image

ಹದಿಹರೆದ ನಂತರದ ಬದುಕು,
ಗಡಿ ಬಿಡಿ, ಜವಾಬ್ದಾರಿಗಳು, ಯೋಚನೆಗಳು,
ಸ್ವ ಪ್ರಾಕೃತಿಕ ಭಾವ ಮೆಟ್ಟಿಲುಗಳು,
ಸಮಾಜದ ಸ್ಥಿರ ಕಟ್ಟಳೆಗಳೊಳಗೆ,
ಕಲಿಕೆ ಗಳಿಕೆಗಳೊಳಗೆ ಬೆಂದಿದ್ದೆ…
ಪ್ರತಿ ತಿಸರಗಳಿಗೂ ಉತ್ತರ?
ಆ ಪ್ರಶ್ನೆಗೆ ಉತ್ತರವು ನನ್ನ ದೀಪ್ತತೆಯಲ್ಲೆ ಇತ್ತು!
ಮನದ ಅಂತರಾಳದಲ್ಲಿರುವ ಆ ಮಗು,
ಆ ಹೆಣ್ತನದ ಬೆಂಕಿ ವಿಹಂಗಮವನ್ನು
ನಾನೀಗ ಹಾರಲು ಬಿಟ್ಟೆ!
ರೂಧಿ ಬದ್ಧತೆಯನ್ನೆಲ್ಲ ಕಳಚಿ,
ವ್ಯವಸ್ಥೆತೆಗಳನೆಲ್ಲ ಸಡಿಸಿ,
ನನ್ನ ಸ್ವಂತಿಕೆಗೆ ಉತ್ತೇಜಿಸಿ,
ನನ್ನ ಕೃಷ್ಣತೆಗೆ ನಾನು ಹೆಮ್ಮೆಯಾಗಿರುವೆ.
ಹಾಕಿರುವ ನಿರುಪಯೋಗಿ ಗೆರೆಗಳನ್ನು ದಾಟಿರುವೆ,
ಜೋರಾಗಿ ನಗು, ಅಸೂಯೆ ಹಗೆತನವು ಅಚ್ಚರಿಸಬೇಕು,
ಪ್ರೀತಿಸು ನಿನ್ನ ನೀ ಪ್ರೀತಿಸು,
ಅವಳು ನನ್ನ ಮಗಳು, ನನ್ನ ಮನಸ್ಸು!
ನನ್ನ ಧ್ಯಾನದಲ್ಲಿ ಪ್ರಕಾಶಿಸುವ
ಶಕ್ತಿಯೊಳಗೆ ನನ್ನ ಮಾಧ್ಯಮ ಸೇತುವೆ,
ಒಂದಷ್ಟು ಸ್ಪಿರಿಚ್ಯುಯಾಲಿಟಿ,
ಐ ಲವ್ ಯೂ ನನ್ನ ಮಂತ್ರ,
ಬರೆವಣಿಗೆ ಪುಸ್ತಕಗಳು ನನ್ನ ಗಾರ್ಡಿಯನ್ಸ್,
ಕಪ್ಪು ನನ್ನ ಸೌಂದರ್ಯ ಗುಟ್ಟು,
ನನ್ನದೇ ಫ್ಯಾಶನ್ ಟಚ್,
ಹಾಗೆಯೆ ಒಂದಷ್ಟು ಬಡಿತಗಳಿಗೆ
ನನ್ನ ಬೆವರಿನ ಕುಣಿತ,
ಈ ಪ್ರಕೃತಿಗೆ ಪ್ಲೈಂಗ್ ಕಿಸ್,
ಸ್ನೇಹಕ್ಕೆ ಒಗೆಯ ಅಪ್ಪುಗೆ,
ನನ್ನ ನೋಡಿ ಬಾಲ ಅಲ್ಲಾಡಿಸುವ
ಬೋನಿಗೆ ನನ್ನ ಮುತ್ತು,
ಒಂದು ಕಪ್ ಕಾಫಿ,
ನನಗಿಷ್ಟದಂತೆ ಅಲಂಕೃತ ಕೊಣೆ,
ನನ್ನ ಸಂಪೂರ್ಣತೆಯ ಕನವರಿಕೆ,
ಅಪ್ಪ ಅಮ್ಮನಿಗೆ ಐ ಲವ್ ಯೂ ಪಾಠಗಳು,
ನನ್ನ ರಾಜಕುಮಾರನಿಗೆ ತುಟಿಯ ಗಟ್ಟಿ ಚುಂಬನ.
ಮಳೆರಾಯನು ನನ್ನ ಬಿಸಿ ದೇಹದಮೇಲೆ
ನೀರ ಹನಿ ಚಿಮುಕಿಸಿದಾಗ,
ಬದುಕಿಗೆ ಪ್ರೇಮ ಹರಿಯುವುದು,
ನಾ ವದ್ದೆಯಾದರು,
ನಾನು ಇನ್ನಷ್ಟು ಸುಡುವೆ.
ನನಗಿಷ್ಟದ ಆ ಪುಟ್ಟ ಖುಷಿಗಳನೆಲ್ಲ
ನಾನು ಆಚರಿಸಿ ಸಂಭ್ರಮಿಸುವೆ,
ಭಯದ ಕುಳ್ಳನೊಂದಿಗೆ ನನ್ನ ಕಬಡಿಯಾಟ,
ನನ್ನ ಬದುಕೊಂದು ಚ್ಯಾಲೆಂಜಿಂಗ್ ಗೇಮ್,
ನನ್ನದೇ ಬದುಕಿನಲ್ಲಿ ನಾನಲ್ಲದೆ ಇನ್ಯಾರಿಗೆ ಗೆಲವು, ಅಲ್ಲಿ ನನ್ನ ಪ್ರಯತ್ನ ಬೇಕು,
ಒಂದಷ್ಟು ಸ್ವಂತಿಕೆ, ಒಂದಷ್ಟು ಪ್ರೇಮ,
ನಗು, ಶಕ್ತಿ, ಪ್ರಾರ್ಥನೆ,  ಸವಿ, ಸ್ಪರ್ಶ,
ಇದು ನನ್ನ ಹ್ಯಾಪಿ ಲೈಫ್,
ನನ್ನ ಖುಷಿಯ ಹೆಜ್ಜೆಗೆ
ನಾನಲ್ಲದೆ ಇನ್ಯಾರೂ ನಿರ್ಧರಿಸುವುದಿಲ್ಲ,
“ಬದುಕು ಪ್ರೇಮದಿಂದ…”
ನಿನ್ನ ಬದುಕನ್ನು!
                               – ಶಿಲೋಕ್ ಮುಕ್ಕಾಟಿ

“ಕಬಳಿಸುವ ಕ್ರಾಂತಿ ಕಾಡು”

image

ಚದುರಿದ ಲಿಂಗಗಳಲ್ಲಿ ನನ್ನದೊಂದು ಅಸ್ತಿತ್ವ,
ಚದುರಂಗದ ಬದುಕಿನಲ್ಲಿ ನನ್ನದೊಂದು ಪ್ರಾರಂಭ.
ಪುರುಷತ್ವದ ಕಾವಳದಲ್ಲಿ ನಾನು ಅದೃಷ್ಯ,
ಸ್ತ್ರೀತತ್ವದ ಉತ್ಸವದಲ್ಲಿ ನಾನು ಅಲಕ್ಷ್ಯ.

ದೇಹದ ಧ್ಯೇಯವ ಯಾರು ಕಂಡಾರು,
ಸಂತಾನದ ಉಳಿಗಾಲಕ್ಕೆ ಒಂದು ಕಾಮಹಾಸಿಗೆ.
ಅನುರಾಗ, ಪ್ರಣಯಿಗಳು ದಾಸ್ಯದ ಸಂಭೋಗಕ್ಕೆ,
ನಶ್ವರದ ದೇಹದಾಚೆ ಪ್ರಾಣವು ಜೀವಿಸಿದೆ.

ಆ ಜೀವದೊಳಗೆ ಲಿಂಗಗಳ ಪರಿಮಿತಗಳಿಲ್ಲ,
ಅಲ್ಲೇನಿದ್ದರು ಎರಡೇ ವಿಷಯಗಳಿಗೆ ಅಂಕಣ,
ನಲುಮೆಯ ರೆಕ್ಕೆಯನ್ನು ಬಡಿದು ಹಾರಾಡು,
ಇಲ್ಲವಾದರೆ ಪ್ರತಿಕಾರದ ಕತ್ತಿಯೊಳ್ ಕಾದಾಡು.

ಆ ಅಹಿಂಸೆಯನ್ನು ನಾನೆಂದಿಗೂ ಮೆಚ್ಚಲಿಲ್ಲ,
ಕಿವುಚಿದ ಹಿಂಸೆಯ ಕೈಗಳಲ್ಲಿ ಬೆಳೆದವಳು,
ಪ್ರೇಮಿಸುವುದನ್ನು ಪ್ರತಿ ಪಾವಟಿಗೆಯಲ್ಲಿ ಕಲೆತವಳು,
ನನಗೆ ಅವಮಾನದ ಪ್ರತಿಕಾರವು ಸಿಟ್ಟು-ಪೇಮ.

ಒತ್ತಿ- ಒತ್ತಿ ಹಿಸುಕಿದ ಬೇನೆಯಲ್ಲವು ಉಬ್ಬರಿಸಿದೆ,
ಪ್ರವಾಹಿಸಿದೆ ನಾನು ಬಚ್ಚಿಟ್ಟ ಕಣ್ಣೀರು,
ಒಣಗಿ ಉಸುಕಿದ ಅವಳ ಮನಸ್ಸು,
ಈ ಪ್ರವಾಹದ ಉದ್ರೇಕದ ಹರಿವಿನಲ್ಲಿ ಹಸಿರಾಗಿದ್ದಾಳೆ.

ಆದರೆ ಅವಳು ಪ್ರಕೃತಿಯ ಶಾಂತತೆಯ ಹಸಿರಲ್ಲ,
ತನ್ನ ಬದುಕಿನ ಅಂಗಳವನ್ನು ಕಿತ್ತುಕೊಂಡನಲ್ಲ,
ಸಮಾಜ, ಧರ್ಮ,  ಕಾಯಿದೆಯೆಂದೆಲ್ಲ ಹೇಳಿದನಲ್ಲ,
ಅದೇ…! ಆ ಕುಹುಕಿ ಜಮೀನುದಾರನ ಭೂಮಿಯನ್ನು
ಹಬ್ಬುವ ಮಜುಭೂತಿನ ಕಬಳಿಸುವ ಕ್ರಾಂತಿ ಕಾಡು.
 
    – ಶಿಲೋಕ್ ಮುಕ್ಕಾಟಿ ©

ಅಜಗಜಾಂತರದ ನಲುಮೆ

image

ಅದೇನೋ ಭಾಂಧವ್ಯದ ಬೆಸುಗೆ,
ತಿಳಿಯದ ವಾಂಛಲ್ಯದ ಗ್ರಂಥಿಕೆ,
ಅಂಬಿಕೆಯ ಕುಕ್ಷಿಯ ಅವಿಭಾಗ್ಯ ಆಕೃತಿ,
ಅಂತರದ ನೆತ್ತರ ಹರಿವಿಕೆಯ ಪ್ರಕೃತಿ,
ಅಜಗಜಾಂತರದಲ್ಲಿಯೂ ನಮ್ಮಿಬ್ಬರ ಮೈತ್ರಿಯತಿ.

ಮಾಂಸದ ಮೇಲಿರುವ ತೊಗಲು ಬೇರೆ,
ಆಶಯದ ಒಳಗಿರುವ ಅಳಲು ಬೇರೆ,
ನಮ್ಮದು ವೈವಿಧ್ಯಮಯ ಗಾಥೆಯ ತೆರೆ,
ನಮ್ಮದು ವಿಭನ್ನತೆಯ ಯಾತನೆಯ ಮರೆ,
ಅಜಗಜಾಂತರದಲ್ಲಿಯೂ ನಮ್ಮಿಬ್ಬರ ಅಕ್ಕರೆ.

ವ್ಯತ್ಯಾಸದ ವಾರ್ಧಕ್ಯದ ರಾಗ,
ಆಯುಷ್ಯದ ಸಾಂಗತ್ಯವು ಈಗ,
ನುಡಿಗಳ ಮೃದಂಗ ಬಡಿತ,
ಸಂಗಡಳ ಸಂವೇದನ ಮಿಡಿತ,
ಅಜಗಜಾಂತರದಲ್ಲಿಯೂ ನಮ್ಮಿಬ್ಬರ ಸುಳಿತ.

ತರೆದಿದೆ ಭ್ರಾತೃತ್ವದ ಬಾಗಿಲು,
ಮೆರೆದಿದೆ ಮಿಶ್ರತ್ವದ ಮೆಟ್ಟಿಲು,
ನೀ ನನ್ನಯ ಅಕ್ಕರೆಯ ಅಕ್ಕ,
ನನ್ನಿಯ ಸಕ್ಕರೆಯ ಪಕ್ಕ,
ಅಜಗಜಾಂತರದಲ್ಲಿಯೂ ನಮ್ಮಿಬ್ಬರ ತೆಕ್ಕ.

ಒರೆಸುವೆ ಕಂಬನಿಯ ತೊಟ್ಟು,
ಅಳಿಸುವೆ ಕತ್ತಲೆಯ ಮೆಟ್ಟು,
ಕಟ್ಟುವೆ ಅಳಿಸದ ಸೂಕ್ತ ಒಳಗು,
ಬೆಳಗುವೆ ಆರದ ದೀಪ್ತ ತೊಳಗು,
ಅಜಗಜಾಂತರದಲ್ಲಿಯೂ ಸಾಗಲಿ ನಮ್ಮಿಬ್ಬರ ಪಯಣ…
ಅಜಗಜಾಂತರದಲ್ಲಿಯೂ ನೆಲಸಲಿ ನಮ್ಮಿಬ್ಬರ ಸ್ಮರಣ…
                     
               -ಶಿಲೋಕ್ ಮುಕ್ಕಾಟಿ. ©

Kinnaras Of The Dark World

38311.jpg

Look at us, born as sluts,
Bearing the embargo of heats,
The tears of a girl are rushed by compassion,
The tears of an effeminate are crushed by exasperation.

My mother loves me, but never understands me.
As for my Father, I am not the one he wanted.
For the siblings we are ghastly speech,
Forget the relatives, it’s a far speech at all.

My childhood was drenched by the rain of molestation,
Hush…! They zipped my mouth, never opened my abduction,
Here comes the lover in my sixteens,
But for him it’s only the lust, not love.

Never told the reality of molestations, exploitations,
Even If I tell, Who’s there to listen to my oppression?
I was chased by the nightmares of shame and abandon,
My bed is wet with the tears and blood.

Even the Gods do not have many names,
But we are labelled as such it blows our names,
The labels have sucked like bloody leeches do,
The labels are swallowed and we curl as Pythons do.

Noose, Bottles of poisons, Pond and Well,
Welcomes as days rolled as well,
But the fire of femininity is burning in the heart,
Why should we die when there is no fault?

In the roasting prison of manly bones,
I’m the burning womanly soul,
In the world of darkness,
With the crown of Shining tears,
I’m the lightening power who rules the hurdles dawn & dusk.

Neither the masculine sea of dropping seeds,
Nor the feminine nature giving breathes,
I’m the space and peace between them,
I’m the genderless guardian angel of the gender hum…

The pages of the Vedas called us as Kinnars,
We are the two spirited people over the seas,
The Kali of revolution has come by rushing,
Hear the awaited battle of equality roaring.

You so called nature’s dear Homo sapiens,
To flood the erroneous justification of you,
To blood the stereotypes of hierarchy & patriarchy,
To teach what real humanity is… We have come.

For the realisation and recognition of our existence & dignity,
Here we are, The Kinnaras of the dark world…

– SHILOK MUKKATI

Voice from a realist : You bloody transphobic, I voice the reality that is hidden from ages.

images (4)

The queerness is something which is incompetent to define to the human’s knowledge. The agenda of understanding femininity and masculinity has been an irony from the ages to different regions and different languages___ It just takes minute to accept another person, but the man’s false ego has been preventing him from accepting the other person’s uniqueness. The fear of the uniqueness, the guilt of non-inimitability, the fear of getting down shoves the man to dominate and kill the queer. Envisage the acceptance of real femininity and masculinity in the earth could make a man to create his own paradise in his living, acceptance of reality would have pushed the happiness around the nature, the reality which the body that is made of stupid genitals in biological presence will not be mattered, the mattered reality was the inner presence of gender, that inner presence of power, yes you can also call it as Soul. But, he kills his co-livings, slays that innocent souls, he is a real beast who wanted to overcome his fears.

It has been a hurdles from ages for a transgender to live a peaceful life. We are oppressed, violated, tortured mentally, extreme brutality is taken place, and the sexual harassment is numerous. We are stared  at in public, humiliated, threatened for our tolerance. What have we done? Is it because we are living without masks, is it because we are different and you can’t resist our uniqueness, is it because we are not same like you? Is it because we live without boundaries and rules?  If I am a transgender what is taken from you? You being transphobic is not my problem! You being an illiterate and lacking knowledge is not my problem. If I am a minority it’s because I am special and I will celebrate my specialty. I don’t need any permission or acceptance to lead a dignified life! It’s not my choice, I am born so, I am created so, and I am bloomed in this nature by this magical blessings from the time, truth and Mother Nature.

Till now it was the stupidity of queer to please others for the acceptance, but now I am not going to do the same bloody mistake. I will own my dignity, voice and celebrate my sexuality. From now it will be not as smooth as requesting for thee acceptance, I don’t want your sympathy… You can’t sympathies my life too. Because you don’t know how my body feels, how my mind flows, how I breathe in this patriarchal, stereotypical and conservative social pollution. I don’t even want demand my respect! Because who have given you the bloody power to judge me? I have been this way. I being a Shakti the power of compassion and kindness is now becoming Kali the power of time, death and truth. I am a phoenix who has died many times and has been born again. I know the death which you don’t know..! I know the reality which you don’t know..! I have lost my patience and ready for the war which you don’t know… enough of this serenity. I will create my own life, you fool.

(My dear heterosexual friends who are not transphobic, please don’t get offended with my article. This is also for Gay Bisexual Lesbian people who are transphobic too, I am addressing all the transphobic people here..)

To be continued…

    – Shilok Mukkati

ಪ್ರಭೆಯ ಮೌನಳಾಗಿ…

image

ನಗ್ನಳಾಗಿ ನಿತ್ತೆ ನಿನ್ನ ಸಮಕ್ಷಮದಲ್ಲಿ
ನನ್ನ ಗರ್ವಿಷ್ಠಗಳ ತೊಡಕುಗಳನ್ನು ಕಳಚಿ
ನಿನ್ನ ಪ್ರೇಮದ ತರಂಗಗಳಿಗೆ,
ನಿನ್ನ ಅಭಿಜ್ಞಾನದ ಕಿರಣಗಳಿಗೆ
ಬೆತ್ತಲಾಗಿ ನಾನು ಅರಿವಿನ ದೀಪಕ್ಕೆ.

ಸೂರ್ಯಾಸ್ತದಲ್ಲಿ ಸೂರ್ಯನು ವಚನಿಸಿದಂತೆ
ವಚನದಂತೆ ಪ್ರತಿ ಮುಂಜಾನೆಯು ಉದಯಿಸುವಂತೆ
ನನ್ನ ಆತ್ಮವು ಹಿಂತಿರುಗುವುದು ನಿನ್ನ ಮಡಿಲಿಗೆ
ಉತ್ಥಾನದ ಪ್ರೇಮದ ತಾಯ್ತನದ ಮಡಿಲಿಗೆ
ಮುಳುಗಿ ಉದ್ಭವಿಸುವೆ ಖಚರದ ದೀವಿಗೆಯಾಗಿ.

ವಿಹಂಗಮ ಬಡಿದೆದ್ದು ಹಾರುವ ಎಲರು ನಾನು
ನಾನು ಅಂತರಾತ್ಮ, ನೇಸರ ಬೆಳಗುವ ಚೈತನ್ಯ ನಾ…
ನಾನು ಪ್ರತಿ ತಾಯ್ತನದಲ್ಲಿ ಘಮಿಸುವ ಪ್ರೇಮ
ನಾನೇ ಉದರದ ಜೀವ, ಮಸಣದ ಸಾವು,
ಲಯಗಳ ಶಾಂತತೆಯ ಮೌನ ನಾನು, ಸ್ವೀಕರಿಸು…

– ಶಿಲೋಕ್ ಮುಕ್ಕಾಟಿ ©