ಹೂವು ಮತ್ತು ಭಿದುರು – ೧ / Flowers and Fragility 1

ಪ್ರಣಯ ಕಣಗಳ ಪ್ರತಿ ಕ್ಷಣಗಳು
ಹುಣ್ಣಿಮೆಯ ಬೆಳಕಿನೊಳಗೆ ಅಣಗಿತ್ತು.
ಕಾಮ ಹಾಸಿಗೆಯಲ್ಲಿ ಚೆಲ್ಲಿದ
ಹೂಗಳ ಪರಿಮಳದಲ್ಲಿ ಗೆಲುವು ನಿನ್ನದದಾಗ,
ಅದೇ ಹೂಗಳ ಸುತ್ತಲಲ್ಲಿ ಚೆಲುವು ನನ್ನದಾಗಿತ್ತು.
ಈ ಚೆಲುವು ಗೆಲುವುಗಳಲ್ಲಿ
ಉಳಿದದ್ದು ನನ್ನ ಸ್ವಪ್ನರಾಗ,
ಕಳೆದದ್ದು ನಿನ್ನ ಅನುರಾಗ.
ಮತ್ತೆ ಹೂವು ಚೆಲ್ಲುವುದು,
ನಿತ್ಯ ಹೂವು ಬಾಡುವುದು,
ಭಿದುರುಗಳಲ್ಲಿ ಮತ್ತೆ ಮತ್ತೆ
ಅರಳುತಿದ್ದೆ ನಿನಗಾಗಿ ಆ
ಛಿದ್ರ ಕನಸುಗಳ ದಳಗಳಲ್ಲಿ…

– ನಿನ್ನವಳು (ಶಿಲೋಕ್ ಮುಕ್ಕಾಟಿ)

 

IMG_4928
PC: Flowers and Fragility by Shiva Sharma